Monday, 4 January 2016

ಕ್ಷಮಿಸು ಬಿಡು ಗೆಳೆತಿ
 ನಾ ನಿನ್ನಿಂದ ದೂರವಾಗಿ ತಪ್ಪು ಮಾಡಿದೆ ಕಣೆ ನನ್ನಿಂದ ನೀ ದೂರವಿರಬಹುದು ಆದರೆ ನೀ ಕೊಟ್ಟ
 ಪ್ರೀತಿ ಇಂದು ಜೀವಂತವಾಗಿ ನನ್ನಲ್ಲಿಯೇ ಇದೆ,
ನಿನ್ನ ಮಾತುಗಳು ನೆನಪಾಗಿ ಮರುಕಳಿಸುತ್ತಿದೆ.
ನಿನ್ನ ಪ್ರೀತಿಯನ್ನು ಕಳೆದುಕೊಂಡ ನಾನೆ ಪಾಪಿ ಕಣೇ ಮತ್ತೆ ನಿನ್ನಲ್ಲಿ ಸೆರಬೆಕೆಂದು ಅನಿಸುತ್ತಿದೆ ನೀ ದೂರಾದರೂ ಇನ್ನು ಹತ್ತಿರವಿರುವೆ ಎಂದೆನಿಸುತ್ತಿದೆ,
ನನ್ನ ಬದುಕಿಗೆ ನೀ ಕೊಟ್ಟ ಪ್ರೀತಿ ಅಪಾರ ಕಣೇ ಅದರ ಋಣವ ತೀರಿಸಲು ಇನ್ನೆಷ್ಟು ಜನ್ಮವೆತ್ತಿದರೂ ಸಾಲದು,
ನಿನ್ನ ನೆನಪಲ್ಲಿ ನಾ ಹುಚ್ಚನಾಗಿರುವೇ ಗೆಳೆತಿ ಉಸಿರುಗಟ್ಟಿಸುವಂತ ಆ ನಿನ್ನ ಪ್ರೀತಿ ಇಂದು
ಉಸಿರು ನಿಲ್ಲುವಂತೆ ಮಾಡುತ್ತಿದೆ,
ಕಾರಣ ಮತ್ತೆ ನಿನ್ನ ಪ್ರೀತಿ ಬೇಕೆನಿಸುತ್ತಿದೆ
 ನನಗೆ ನನ್ನ ಭಾವನೆಗಳನ್ನು ಹೇಳದೆ ಇರಲಾಗುತ್ತಿಲ್ಲ ಎಲ್ಲಾ ಇದ್ದರೂ ನಾ ಇಂದು ಒಬ್ಬಂಟಿ ಕಣೇ
 ನಿಜವಾದ ಪ್ರೀತಿ ಒಂದು ಗಾಳಿಯಂತೆ ಯಾರ ಕಣ್ಣಿಗೂ ಕಾಣದು ಆದರೆ ನಿನ್ನ ಪ್ರೀತಿ ಕಂಡರೂ
 ಕಳೆದುಕೊಂಡ ನಾನೆ ದಡ್ಡ ಗೆಳೆತಿ,
ನಿನ್ನ ನೆನಪಾದಗಲೆಲ್ಲ ಕಣ್ಣಲ್ಲಿ ನೀರು ತುಂಬುತ್ತದೆ
 ನಿನ್ನಿಂದ ದೂರಾಗಿ ಇಂದು ನೊವಲ್ಲಿ ದಿನ ಕಳೆಯತೀರವೆ
 ಒಂದು ಬಾರಿ ನಿನ್ನ ಮಡಿಲಲ್ಲೀ ಮಲಗಿ ಬಿಕ್ಕಿ-ಬಿಕ್ಕಿ ಅಳಬೇಕು ಅನ್ನಿಸುತ್ತಿದೆ ಮುದ್ದು ಕಂದ ಪ್ರಿಯ [ಅಮ್ಮು]

No comments:

Post a Comment